2 ಪೂರ್ವಕಾಲವೃತ್ತಾ 18 : 1 (KNV)
ಯೆಹೋಷಾಫಾಟನಿಗೆ ಐಶ್ವರ್ಯವೂ ಘನತೆಯೂ ಅಧಿಕವಾಗಿರುವಾಗ ಅವನು ಅಹಾಬನ ಸಂಗಡ ಬಂಧುತ್ವ ಮಾಡಿದನು.
2 ಪೂರ್ವಕಾಲವೃತ್ತಾ 18 : 2 (KNV)
ಕೆಲವು ವರುಷಗಳ ತರುವಾಯ ಅವನು ಅಹಾಬನ ಬಳಿಗೆ ಸಮಾರ್ಯಕ್ಕೆ ಹೋದನು; ಆಗ ಅಹಾಬನು ಅವನಿಗೋಸ್ಕರವೂ ಅವನ ಸಂಗಡ ಇದ್ದ ಜನರಿಗೋ ಸ್ಕರವೂ ಅನೇಕ ಕುರಿದನಗಳನ್ನು ಕೊಯಿಸಿ ತನ್ನ ಸಂಗಡ ಗಿಲ್ಯಾದಿನಲ್ಲಿರುವ ರಾಮೋತಿಗೆ ಹೋಗಲು ಪ್ರೇರೇಪಿಸಿದನು.
2 ಪೂರ್ವಕಾಲವೃತ್ತಾ 18 : 3 (KNV)
ಇಸ್ರಾಯೇಲಿನ ಅರಸನಾದ ಅಹಾ ಬನು ಯೆಹೂದದ ಅರಸನಾದ ಯೆಹೋಷಾಫಾಟ ನಿಗೆ--ಗಿಲ್ಯಾದಿನಲ್ಲಿರುವ ರಾಮೋತಿಗೆ ನೀನು ನನ್ನ ಸಂಗಡ ಬರುತ್ತೀಯೋ ಅಂದನು. ಅದಕ್ಕವನು--ನಾನು ನಿನ್ನ ಹಾಗೆಯೂ ನನ್ನ ಜನರು ನಿನ್ನ ಜನರ ಹಾಗೆಯೂ ಯುದ್ಧದಲ್ಲಿ ನಿನ್ನ ಸಂಗಡ ಇರು ವೆವು ಅಂದನು.
2 ಪೂರ್ವಕಾಲವೃತ್ತಾ 18 : 4 (KNV)
ಆದರೆ ಯೆಹೋಷಾಫಾಟನು ಇಸ್ರಾಯೇಲಿನ ಅರಸನಿಗೆ--ದಯಮಾಡಿ ಈ ಹೊತ್ತು ಕರ್ತನ ವಾಕ್ಯವನ್ನು ವಿಚಾರಿಸು ಅಂದನು.
2 ಪೂರ್ವಕಾಲವೃತ್ತಾ 18 : 5 (KNV)
ಆಗ ಇಸ್ರಾಯೇಲಿನ ಅರಸನು ನಾನೂರು ಮಂದಿ ಪ್ರವಾದಿ ಗಳನ್ನು ಕೂಡಿಸಿ ಅವರಿಗೆ--ನಾವು ಗಿಲ್ಯಾದಿನಲ್ಲಿರುವ ರಾಮೋತಿಗೆ ಯುದ್ಧಕ್ಕೆ ಹೋಗಬಹುದೋ ಬಾರದೋ ಅಂದನು. ಅದಕ್ಕವರು--ಹೋಗು; ದೇವರು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವನು ಅಂದರು.
2 ಪೂರ್ವಕಾಲವೃತ್ತಾ 18 : 6 (KNV)
ಆದರೆ ಯೆಹೋಷಾಫಾಟನು--ಇವರ ಹೊರತಾಗಿ ನಾವು ವಿಚಾರಿಸುವ ಹಾಗೆ ಇಲ್ಲಿ ಕರ್ತನ ಪ್ರವಾದಿಯು ಯಾವನೂ ಇಲ್ಲವೋ ಅಂದನು.
2 ಪೂರ್ವಕಾಲವೃತ್ತಾ 18 : 7 (KNV)
ಆಗ ಇಸ್ರಾಯೇ ಲಿನ ಅರಸನು ಯೊಹೋಷಾಫಾಟನಿಗೆ -- ನಾವು ಕರ್ತನಿಂದ ವಿಚಾರಿಸುವ ಹಾಗೆ ಇಮ್ಲನ ಮಗನಾದ ವಿಾಕಾಯೆಹುನೆಂಬವನು ಇನ್ನೊಬ್ಬನಿದ್ದಾನೆ. ಆದರೆ ನಾನು ಅವನನ್ನು ಹಗೆಮಾಡುತ್ತೇನೆ; ಅವನು ನನ್ನನ್ನು ಕುರಿತು ಒಳ್ಳೆಯದನ್ನಲ್ಲ; ಕೆಟ್ಟದ್ದನ್ನೇ, ಪ್ರವಾದಿಸುತ್ತಾನೆ ಅಂದನು. ಅದಕ್ಕೆ ಯೆಹೋಷಾಫಾಟನು--ಅರಸನು ಹಾಗೆ ಅನ್ನದಿರಲಿ ಅಂದನು.
2 ಪೂರ್ವಕಾಲವೃತ್ತಾ 18 : 8 (KNV)
ಇಸ್ರಾಯೇಲಿನ ಅರ ಸನು ಒಬ್ಬ ಅಧಿಕಾರಿಯನ್ನು ಕರೆದು ಇಮ್ಲನ ಮಗ ನಾದ ವಿಾಕಾಯೆಹುವನ್ನು ಶೀಘ್ರವಾಗಿ ಕರಕೊಂಡು ಬಾ ಅಂದನು.
2 ಪೂರ್ವಕಾಲವೃತ್ತಾ 18 : 9 (KNV)
ಆದರೆ ಇಸ್ರಾಯೇಲಿನ ಅರಸನೂ ಯೆಹೂದದ ಅರಸನಾದ ಯೆಹೋಷಾಫಾಟನೂ ವಸ್ತ್ರಗಳನ್ನು ಧರಿಸಿಕೊಂಡು ಸಮಾರ್ಯದ ಬಾಗಲಿನ ಮುಂದೆ ಬೈಲಿನಲ್ಲಿ ತಮ್ಮ ತಮ್ಮ ಸಿಂಹಾಸನಗಳ ಮೇಲೆ ಕುಳಿತಿದ್ದರು. ಸಕಲ ಪ್ರವಾದಿಗಳೂ ಅವರ ಮುಂದೆ ಪ್ರವಾದಿಸಿದರು.
2 ಪೂರ್ವಕಾಲವೃತ್ತಾ 18 : 10 (KNV)
ಆಗ ಕೆನಾನನ ಮಗನಾದ ಚಿದ್ಕೀ ಯನು ತನಗೆ ಕಬ್ಬಿಣದ ಕೊಂಬುಗಳನ್ನು ಮಾಡಿಕೊಂಡು --ಇವುಗಳಿಂದ ನೀನು ಅರಾಮ್ಯರನ್ನು ನಿರ್ಮೂಲ ಮಾಡುವ ವರೆಗೂ ಇರಿದು ಹಾಕುವಿ ಎಂದು ಕರ್ತನು ಹೇಳುತ್ತಾನೆ ಅಂದನು.
2 ಪೂರ್ವಕಾಲವೃತ್ತಾ 18 : 11 (KNV)
ಸಮಸ್ತ ಪ್ರವಾದಿಗಳೂ ಹಾಗೆಯೇ ಪ್ರವಾದಿಸಿ--ಗಿಲ್ಯಾದಿನಲ್ಲಿರುವ ರಾಮೋ ತಿಗೆ ಹೋಗಿ ಜಯಹೊಂದು; ಕರ್ತನು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವನು ಅಂದರು.
2 ಪೂರ್ವಕಾಲವೃತ್ತಾ 18 : 12 (KNV)
ಆದರೆ ವಿಾಕಾಯೆಹುವನ್ನು ಕರೆಯುವದಕ್ಕೆ ಹೋದ ಸೇವಕನು ಅವನಿಗೆ--ಇಗೋ, ಪ್ರವಾದಿಗಳ ಮಾತುಗಳು ಒಂದೇ ಒಪ್ಪಿಗೆಯಿಂದ ಅರಸನಿಗೆ ಒಳ್ಳೇ ದನ್ನು ಪ್ರಕಟಿಸುತ್ತವೆ; ನಿನ್ನ ಮಾತು ಅವರಲ್ಲಿ ಒಬ್ಬನ ಮಾತಿನ ಹಾಗೆಯೇ ಇರಲಿ; ಒಳ್ಳೇ ಮಾತು ಆಡು ಅಂದನು.
2 ಪೂರ್ವಕಾಲವೃತ್ತಾ 18 : 13 (KNV)
ಅದಕ್ಕೆ ಮಿಕಾಯೆಹುವು--ಕರ್ತನ ಜೀವ ದಾಣೆ, ನನ್ನ ದೇವರು ಏನು ಹೇಳುವನೋ ಅದನ್ನು ಹೇಳುವೆನು ಅಂದನು.
2 ಪೂರ್ವಕಾಲವೃತ್ತಾ 18 : 14 (KNV)
ಅವನು ಅರಸನ ಬಳಿಗೆ ಬಂದಾಗ ಅರಸನು ಅವನಿಗೆ--ವಿಾಕಾಯೆಹುವೇ, ನಾವು ರಾಮೋತ್ ಗಿಲ್ಯಾದಿಗೆ ಯುದ್ಧಕ್ಕೆ ಹೋಗಲೋ ಇಲ್ಲವೆ ನಾವು ಹೋಗುವದು ಬೇಡವೋ? ಅಂದನು. ಆಗ ಅವನು--ಹೋಗಿ ಜಯಹೊಂದಿರಿ, ಅವರು ನಿಮ್ಮ ಕೈಯಲ್ಲಿ ಒಪ್ಪಿಸಲ್ಪಡುವರು ಅಂದನು.
2 ಪೂರ್ವಕಾಲವೃತ್ತಾ 18 : 15 (KNV)
ಆಗ ಅರಸನು ಅವನಿಗೆ--ನೀನು ಕರ್ತನ ಹೆಸರಿನಲ್ಲಿ ಸತ್ಯ ವನ್ನಲ್ಲದೆ ಬೇರೊಂದು ನನಗೆ ಹೇಳಬಾರದೆಂದು ನಾನು ಎಷ್ಟುಸಾರಿ ನಿನಗೆ ಆಣೆ ಇಡಬೇಕು ಅಂದನು.
2 ಪೂರ್ವಕಾಲವೃತ್ತಾ 18 : 16 (KNV)
ಅದ ಕ್ಕವನು--ಕಾಯುವವನಿಲ್ಲದ ಕುರಿಗಳ ಹಾಗೆ ಬೆಟ್ಟಗಳ ಮೇಲೆ ಚದರಿಸಲ್ಪಟ್ಟ ಸಮಸ್ತ ಇಸ್ರಾಯೇಲ್ಯರನ್ನು ಕಂಡೆನು. ಆಗ ಕರ್ತನು--ಇವರಿಗೆ ಯಜಮಾನನು ಇಲ್ಲ; ಪ್ರತಿ ಮನುಷ್ಯನು ತನ್ನ ಮನೆಗೆ ಸಮಾಧಾನ ವಾಗಿ ತಿರುಗಲಿ ಅಂದನು.
2 ಪೂರ್ವಕಾಲವೃತ್ತಾ 18 : 17 (KNV)
ಆಗ ಇಸ್ರಾಯೇಲಿನ ಅರಸನು ಯೆಹೋಷಾಫಾಟನಿಗೆ--ಇವನು ನನ್ನನ್ನು ಕುರಿತು ಒಳ್ಳೇದನ್ನಲ್ಲ, ಕೆಟ್ಟದ್ದನ್ನೇ ಪ್ರವಾದಿಸುವನೆಂದು ನಾನು ನಿನಗೆ ಹೇಳಲಿಲ್ಲವೇ ಅಂದನು.
2 ಪೂರ್ವಕಾಲವೃತ್ತಾ 18 : 18 (KNV)
ಅದಕ್ಕೆ ವಿಾಕಾಯೆಹುವು ಹೇಳಿದ್ದೇನಂದರೆ--ಕರ್ತನ ವಾಕ್ಯ ವನ್ನು ಕೇಳು. ಕರ್ತನು ತನ್ನ ಸಿಂಹಾಸನದ ಮೇಲೆ ಕುಳಿತಿರುವದನ್ನೂ ಆಕಾಶದ ಸಮಸ್ತ ಸೈನ್ಯವು ಆತನ ಬಲಪಾರ್ಶ್ವದಲ್ಲಿಯೂ ಎಡಪಾರ್ಶ್ವದಲ್ಲಿಯೂ ನಿಂತಿರು ವದನ್ನೂ ನಾನು ಕಂಡೆನು.
2 ಪೂರ್ವಕಾಲವೃತ್ತಾ 18 : 19 (KNV)
ಆಗ ಕರ್ತನು--ಇಸ್ರಾ ಯೇಲಿನ ಅರಸನಾದ ಅಹಾಬನು ಹೋಗಿ ರಾಮೋತ್ ಗಿಲ್ಯಾದಿನಲ್ಲಿ ಬೀಳುವ ಹಾಗೆ ಅವನನ್ನು ಮರುಳು ಗೊಳಿಸುವವನು ಯಾರು ಅಂದನು.
2 ಪೂರ್ವಕಾಲವೃತ್ತಾ 18 : 20 (KNV)
ಒಬ್ಬನು ಹೀಗೆಯೂ ಮತ್ತೊಬ್ಬನು ಹಾಗೆಯೂ ಹೇಳುತ್ತಿರುವಾಗ ಒಂದು ಆತ್ಮ ಹೊರಟು ಬಂದು ಕರ್ತನ ಮುಂದೆ ನಿಂತು -- ನಾನು ಅವನನ್ನು ಮರುಳುಗೊಳಿಸುತ್ತೇನೆ ಅಂದಿತು.
2 ಪೂರ್ವಕಾಲವೃತ್ತಾ 18 : 21 (KNV)
ಆಗ ಕರ್ತನು ಅದಕ್ಕೆ--ಯಾವದರಿಂದ ಅಂದನು. ಅದು--ನಾನು ಹೊರಟು ಅವನ ಎಲ್ಲಾ ಪ್ರವಾದಿಗಳ ಬಾಯಲ್ಲಿ ಸುಳ್ಳು ಆತ್ಮವಾಗಿರುವೆನು ಅಂದಿತು. ಅದಕ್ಕೆ ಆತನು--ನೀನು ಅವನನ್ನು ಮರುಳು ಗೊಳಿಸುವಿ, ಮತ್ತು ಜಯಿಸುವಿ; ಹೊರಟುಹೋಗಿ ಹಾಗೆ ಮಾಡು ಅಂದನು.
2 ಪೂರ್ವಕಾಲವೃತ್ತಾ 18 : 22 (KNV)
ಆದದರಿಂದ ಇಗೋ, ಕರ್ತನು ಈ ಸಮಸ್ತವಾದ ನಿನ್ನ ಪ್ರವಾದಿಗಳ ಬಾಯಿಯಲ್ಲಿ ಸುಳ್ಳಾದ ಆತ್ಮವನ್ನು ಇಟ್ಟಿದ್ದಾನೆ. ಕರ್ತನು ನಿನ್ನನ್ನು ಕುರಿತು ಕೇಡನ್ನು ಹೇಳಿದ್ದಾನೆ ಅಂದನು.
2 ಪೂರ್ವಕಾಲವೃತ್ತಾ 18 : 23 (KNV)
ಆಗ ಕೆನಾನನ ಕುಮಾರನಾದ ಚಿದ್ಕೀಯನು ಸವಿಾಪಕ್ಕೆ ಬಂದು ವಿಾಕಾಯೆಹುವಿನ ಕೆನ್ನೆಯ ಮೇಲೆ ಹೊಡೆದು ಕರ್ತನ ಆತ್ಮವು ನನ್ನನ್ನು ಬಿಟ್ಟು ನಿನ್ನ ಸಂಗಡ ಮಾತಾನಾಡಲು ಯಾವ ಮಾರ್ಗವಾಗಿ ಬಂತು ಅಂದನು. ಅದಕ್ಕೆ ವಿಾಕಾಯೆಹುವು--
2 ಪೂರ್ವಕಾಲವೃತ್ತಾ 18 : 24 (KNV)
ಇಗೋ, ನಿನ್ನನ್ನು ಬಚ್ಚಿಟ್ಟುಕೊಳ್ಳಲು ಒಳಕೊಠಡಿಗೆ ಹೋಗುವ ದಿವಸದಲ್ಲಿ ನೋಡುವಿ ಅಂದನು.
2 ಪೂರ್ವಕಾಲವೃತ್ತಾ 18 : 25 (KNV)
ಆಗ ಇಸ್ರಾಯೇ ಲಿನ ಅರಸನು--ನೀವು ವಿಾಕಾಯೆಹುವನ್ನು ಹಿಡಿದು ಪಟ್ಟಣದ ಅಧಿಪತಿಯಾದ ಆಮೋನನ ಬಳಿಗೂ ಅರಸನ ಮಗನಾದ ಯೋವಾಷನ ಬಳಿಗೂ ಅವನನ್ನು ಹಿಂದಕ್ಕೆ ಒಯ್ದು ಹೀಗೆ ಹೇಳಿರಿ--
2 ಪೂರ್ವಕಾಲವೃತ್ತಾ 18 : 26 (KNV)
ಅರಸನು ಹೇಳು ವದೇನಂದರೆ--ನೀವು ಇವನನ್ನು ಸೆರೆಮನೆಯಲ್ಲಿಟ್ಟು ನಾನು ಸಮಾಧಾನವಾಗಿ ಬರುವ ಮಟ್ಟಿಗೂ ಅವನಿಗೆ ಬಾಧೆಯ ರೊಟ್ಟಿಯನ್ನೂ ಬಾಧೆಯ ನೀರನ್ನೂ ತಿನ್ನಲು ಕೊಡಿರಿ ಅಂದನು.
2 ಪೂರ್ವಕಾಲವೃತ್ತಾ 18 : 27 (KNV)
ಅದಕ್ಕೆ ವಿಾಕಾಯೆಹುವುನೀನು ಸಮಾಧಾನದಿಂದ ಬಂದೇ ಬರುವದಾದರೆ ಕರ್ತನು ನನ್ನ ಮುಖಾಂತರ ಮಾತನಾಡಲಿಲ್ಲ ಎಂದು ಹೇಳಿ--ಜನರೇ, ನೀವೆಲ್ಲರು ಕೇಳಿರಿ ಅಂದನು.
2 ಪೂರ್ವಕಾಲವೃತ್ತಾ 18 : 28 (KNV)
ಹೀಗೆಯೇ ಇಸ್ರಾಯೇಲಿನ ಅರಸನೂ ಯೆಹೂ ದದ ಅರಸನಾದ ಯೆಹೋಷಾಫಾಟನೂ ರಾಮೋತ್ ಗಿಲ್ಯಾದಿಗೆ ಹೋದರು.
2 ಪೂರ್ವಕಾಲವೃತ್ತಾ 18 : 29 (KNV)
ಆಗ ಇಸ್ರಾಯೇಲಿನ ಅರ ಸನು ಯೆಹೋಷಾಫಾಟನಿಗೆ--ನಾನು ನನ್ನನ್ನು ಮರೆ ಮಾಜಿ ಯುದ್ಧದಲ್ಲಿ ಪ್ರವೇಶಿಸುವೆನು; ಆದರೆ ನೀನು ನಿನ್ನ ವಸ್ತ್ರಗಳನ್ನು ಧರಿಸಿಕೊಂಡಿರು ಅಂದನು. ಹಾಗೆಯೇ ಇಸ್ರಾಯೇಲಿನ ಅರಸನು ತನ್ನನ್ನು ಮರೆಮಾಜಿದನು; ಅವರು ಯುದ್ಧಕ್ಕೆ ಹೋದರು.
2 ಪೂರ್ವಕಾಲವೃತ್ತಾ 18 : 30 (KNV)
ಆದರೆ ಅರಾಮಿನ ಅರಸನು ತನ್ನ ರಥಗಳ ಮೇಲೆ ಅಧಿಕಾರವುಳ್ಳವರಿಗೆನೀವು ಹಿರಿಕಿರಿಯರ ಸಂಗಡ ಯುದ್ಧಮಾಡದೆ ಇಸ್ರಾ ಯೇಲಿನ ಅರಸನ ಸಂಗಡವೇ ಯುದ್ಧಮಾಡಿರಿ ಎಂದು ಆಜ್ಞಾಪಿಸಿದ್ದನು.
2 ಪೂರ್ವಕಾಲವೃತ್ತಾ 18 : 31 (KNV)
ಆದದರಿಂದ ರಥಗಳ ಅಧಿಪತಿ ಗಳು ಯೆಹೋಷಾಫಾಟನನ್ನು ನೋಡಿದಾಗ--ನಿಶ್ಚ ಯವಾಗಿ ಇವನೇ ಇಸ್ರಾಯೇಲಿನ ಅರಸನೆಂದು ಹೇಳಿ ಅವನ ಸಂಗಡ ಯುದ್ಧಮಾಡುವದಕ್ಕೆ ಸುತ್ತಿಕೊಂಡರು. ಯೆಹೋಷಾಫಾಟನು ಕೂಗಿಕೊಳ್ಳಲು ಕರ್ತನು ಅವ ನಿಗೆ ಸಹಾಯಕೊಟ್ಟನು. ಇದಲ್ಲದೆ ದೇವರು ಅವರನ್ನು ಅವನ ಕಡೆಯಿಂದ ತೊಲಗಿಸಿದನು.
2 ಪೂರ್ವಕಾಲವೃತ್ತಾ 18 : 32 (KNV)
ಅವನು ಇಸ್ರಾ ಯೇಲಿನ ಅರಸನಲ್ಲವೆಂದು ರಥಗಳ ಅಧಿಪತಿಗಳು ನೋಡಿ ಅವನನ್ನು ಬಿಟ್ಟು ತಿರುಗಿಕೊಂಡರು.
2 ಪೂರ್ವಕಾಲವೃತ್ತಾ 18 : 33 (KNV)
ಆದರೆ ಒಬ್ಬನು ಗುರಿಯಿಡದೆ ಬಿಲ್ಲಿಗೆ ಬಾಣ ವನ್ನೇರಿಸಿ ಇಸ್ರಾಯೇಲಿನ ಅರಸನನ್ನು ಕವಚದ ಸಂದು ಗಳಲ್ಲಿ ಹೊಡೆದನು. ಆದದರಿಂದ ಅವನು ತನ್ನ ಸಾರಥಿಗೆ--ನೀನು ನಿನ್ನ ಕೈಯನ್ನು ತಿರುಗಿಸಿ ನನ್ನನ್ನು ಸೈನ್ಯದೊಳಗಿಂದ ಆಚೇಕಡೆ ತೆಗೆದುಕೊಂಡು ಹೋಗು; ನಾನು ಗಾಯಪಟ್ಟಿದ್ದೇನೆ ಅಂದನು.
2 ಪೂರ್ವಕಾಲವೃತ್ತಾ 18 : 34 (KNV)
ಆ ದಿನ ಯುದ್ಧ ಪ್ರಬಲವಾದದರಿಂದ ಇಸ್ರಾಯೇಲಿನ ಅರ ಸನು ಸಾಯಂಕಾಲದ ವರೆಗೂ ಅರಾಮ್ಯರಿಗೆ ಎದುರಾಗಿ ರಥದಲ್ಲೇ ಆತುಕೊಂಡಿದ್ದು ಸೂರ್ಯನು ಅಸ್ತಮಿಸಿ ದಾಗ ಸತ್ತನು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34